•  
  •  
  •  
  •  
Index   ವಚನ - 100    Search  
 
ಸಂಚಾರದಿಂದ ತರಗೆದ್ದು, ತನ್ನಂಗದ ಸಂಚಿತವ ಬಿಟ್ಟು, ವಾಯುವಿನ ಸಂಚಾರದಲ್ಲಿ ಎಯ್ದಿ, ಸಂಚಾರ ನಿಂದು, ಆ ತರಗು ಮತ್ತೊಂದು ಸೀಮೆಯ ಸಂಚಿತದಲ್ಲಿ ನಿಂದು, ಆ ತರಗು ಮತ್ತೊಂದು ಸಂಚಾರಕ್ಕೆ ಒಳಗಾಯಿತ್ತು. ಇಂತೀ ಕಾಯಸಂಚಿತವ ಬಿಟ್ಟು, ವಸ್ತುವಿನ ಶಂಕೆಯಲ್ಲಿ ಒಳಗಾಗಬೇಕೆಂಬುದು, ಆ ಗುಣ ಶಂಕೆಯೋ ?, ನಿಶ್ಯಂಕೆಯೋ? ಎಂಬುದಕ್ಕೆ ಮುನ್ನವೆ ಅರಿದು ಮರೆದಲ್ಲಿ, ಕಾಮಧೂಮ ಧೂಳೇಶ್ವರನು ಸಂದು ಸಂಶಯದವನಲ್ಲ.
Transliteration San̄cāradinda tarageddu, tannaṅgada san̄citava biṭṭu, vāyuvina san̄cāradalli eydi, san̄cāra nindu, ā taragu mattondu sīmeya san̄citadalli nindu, ā taragu mattondu san̄cārakke oḷagāyittu. Intī kāyasan̄citava biṭṭu, vastuvina śaṅkeyalli oḷagāgabēkembudu, ā guṇa śaṅkeyō?, Niśyaṅkeyō? Embudakke munnave aridu maredalli, kāmadhūma dhūḷēśvaranu sandu sanśayadavanalla.