ಅಂಗದ ನಿರಾಭಾರಿಗಳೆಲ್ಲರೂ ಕೂಡಿ,
ಲಿಂಗದ ಹೊಲಬ ಬಲ್ಲೆವೆಂದು,
ಅನಂಗನ ಬಲೆಯೊಳಗಿಲ್ಲವೆಂದು,
ಸಕಲರ ಸಂಸರ್ಗವನೊಲ್ಲೆವೆಂದು
ಮತ್ತೆ ಅಖಿಲರೊಳಗೆ ಸಕಲಭೋಗವನುಂಡು,
ವಿಕಳಗೊಂಡವರ ನೋಡಾ.
ಪ್ರಕೃತಿ ಹರಿಯದೆ, ಸುಖವ ಮೆಚ್ಚಿ ತಿರುಗದೆ,
ಇಂತಿಹ ಅಖಿಳಂಗೆ ನಮೋ ನಮೋ, ನಿಃಕಳಂಕಮಲ್ಲಿಕಾರ್ಜುನಾ.
Transliteration Aṅgada nirābhārigaḷellarū kūḍi,
liṅgada holaba ballevendu,
anaṅgana baleyoḷagillavendu,
sakalara sansargavanollevendu
matte akhilaroḷage sakalabhōgavanuṇḍu,
vikaḷagoṇḍavara nōḍā.
Prakr̥ti hariyade, sukhava mecci tirugade,
intiha akhiḷaṅge namō namō, niḥkaḷaṅkamallikārjunā.