ಅಜಾಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ
ಕಾಷ್ಠದ ವೇಷ ಗುರುಚರಲಿಂಗವಾದಲ್ಲಿ, ಎನ್ನ ಕಾಯಕದ ಕಾಷ್ಠ ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ,
ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು
ಆ ಭಾವಕ್ಕೆ ಬಲೋತ್ತರನಾಗಿದ್ದಾತನ ಇರವು,
ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Ajāmala liṅgavādalli, lekkada buḍa niścayaliṅgavādalli matte
kāṣṭhada vēṣa gurucaraliṅgavādalli, enna kāyakada kāṣṭha cinnavādalli, mattāvāva guṇa avaguṇa hiṅgi lēsādalli,
adu tannaya viśvāsadinda, tanage ārembudanaritu, kuritu
ā bhāvakke balōttaranāgiddātana iravu,
entiddaḍante sukha, niḥkaḷaṅka mallikārjunā.