ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ ?
ಎನ್ನ ತನುಮನ ಶುದ್ಧವಿಲ್ಲೆಂದು, ಎನ್ನ ನೆನಹಿನಲ್ಲಿ ನೀ ನಿಲ್ಲೆಯಾ, ಅಯ್ಯಾ ?
ಎನ್ನಪಾತಕದ ಪುಂಜವ ನೀ ಅತಿಗಳೆಯಾ.
ಎನ್ನ ಹಸುವಿಂಗೆ ಅಸು ನೀನೆ, ವಿಷಯಕ್ಕೆ ಮನ ನೀನೆ,
ಭೋಗಿಸುವುದಕ್ಕೆ ಅಂಗ ನೀನೆ.
ಸ್ಫಟಿಕದ ಘಟದೊಳಗಣ ಬಹುರಂಗಿನಂತೆ,
ಎನ್ನ ಅಂಗಮಯ ನೀನಾಗಿ ಹಿಂಗಲೇಕೆ
ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Anupama liṅgave, enna nenahiṅge bāreyā, ayyā?
Enna tanumana śud'dhavillendu, enna nenahinalli nī nilleyā, ayyā?
Ennapātakada pun̄java nī atigaḷeyā.
Enna hasuviṅge asu nīne, viṣayakke mana nīne,
bhōgisuvudakke aṅga nīne.
Sphaṭikada ghaṭadoḷagaṇa bahuraṅginante,
enna aṅgamaya nīnāgi hiṅgalēke
niḥkaḷaṅka mallikārjunā?
Read More