ಅರಿದವ ತಾ[ನರಿ]ದ ಮತ್ತೆ ಹೆರೆ ಹಿಂಗದಿರಬೇಕು.
ಆಸೆ, ಆಮಿಷ, ತಾಮಸ, ಸಕಲೇಂದ್ರಿಯವ ಭಾವಿಸಲಿಲ್ಲ
ಭ್ರಮೆಗೊಳಗಾದ ಮನುಷ್ಯರು
ಜ್ಞಾನಿ ತಾನಾದ ಮತ್ತೆ
ಮಾನವರ ಮೊರೆಹೊಗದೆ ತಾನು ತಾನಾಗಬಲ್ಲಡೆ,
ಆತಂಗೆ [ಭ]ವದ ಭ್ರಮೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.||
Transliteration (Vachana in Roman Script)Aridava tā[nari]da matte here hiṅgadirabēku.
Āse, āmiṣa, tāmasa, sakalēndriyava bhāvisalilla
bhramegoḷagāda manuṣyaru
jñāni tānāda matte
mānavara morehogade tānu tānāgaballaḍe,
ātaṅge [bha]vada bhrame illavende, niḥkaḷaṅka mallikārjunā.||
Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.