•  
  •  
  •  
  •  
Index   ವಚನ - 96    Search  
 
ಆರೂಢನಾದ ಮತ್ತೆ, ರೂಢಿಯ ಅವತಾರವ ಹೊರಲೇಕೊ ? ಕೋಡಗ ಕಂಡಕಂಡವರಲ್ಲಿ ಹಿಂಡಿನೊಳಗೆ ಹೊಕ್ಕು, ಬಂಡುಗೆಡೆಯಲೇತಕ್ಕೋ ? ಈ ಅಂದಗಾರ ಅಣ್ಣಗಳ ಕಂಡು ಭಂಡಾದಿರಯ್ಯಾ. ಅರ್ತಿಗೆಯಾಡುವ ಸತ್ಯವಂತರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Ārūḍhanāda matte, rūḍhiya avatārava horalēko? Kōḍaga kaṇḍakaṇḍavaralli hiṇḍinoḷage hokku, baṇḍugeḍeyalētakkō? Ī andagāra aṇṇagaḷa kaṇḍu bhaṇḍādirayyā. Artigeyāḍuva satyavantariginnettaṇa muktiyo, niḥkaḷaṅka mallikārjunā? Read More