ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು.
ಇಲ್ಲದುದ ಇದ್ದುದೆಂದು ನೋಡಲಿಕಾಗಿ,
ಇದ್ದಲ್ಲಿಯೆ ತಲ್ಲೀಯವಾಯಿತ್ತು
ಇಂತು ಉಭಯವ ಕಡೆಗಾಣಿಸಲಾಗಿ,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
Transliteration Idduda illadalli nōḍalike alliye aḍagittu.
Illaduda iddudendu nōḍalikāgi,
iddalliye tallīyavāyittu
intu ubhayava kaḍegāṇisalāgi,
niḥkaḷaṅka mallikārjunaliṅgadalliye iddittu.