ಊರೊಳಗಿದ್ದು ಊರು ಸುಡಬೇಕಲ್ಲದೆ,
ಊರ ಹೊರಗಿದ್ದು ಸುಡಬಹುದೆ ಅಯ್ಯಾ?
ಕ್ರೀಯೊಳಗದ್ದು ಕ್ರೀಯನರಿಯಬೇಕಲ್ಲದೆ,
ಕ್ರೀ ಹೊರಗಾಗಿ ಜ್ಞಾನವುಂಟೆ ಅಯ್ಯಾ ?
ಕೈದಟ್ಟುವ ಠಾವಿನಲ್ಲಿ ಕಾಳವಗಲ್ಲದೆ
ಕೈದಟ್ಟದ ಠಾವಿನಲ್ಲಿ ಕಾಳಗವುಂಟೆ ಅಯ್ಯಾ ?
ನಾ ನೀನಾದಡೆ ದೇವ, ನೀ ನಾನಾದಡೆ ದೇವ.
ಉಭಯವ ವೇಧಿಸಿದಲ್ಲಿ ತಾನು ತಾನೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Ūroḷagiddu ūru suḍabēkallade,
ūra horagiddu suḍabahude ayyā?
Krīyoḷagaddu krīyanariyabēkallade,
krī horagāgi jñānavuṇṭe ayyā?
Kaidaṭṭuva ṭhāvinalli kāḷavagallade
kaidaṭṭada ṭhāvinalli kāḷagavuṇṭe ayyā?
Nā nīnādaḍe dēva, nī nānādaḍe dēva.
Ubhayava vēdhisidalli tānu tāne,
niḥkaḷaṅka mallikārjunā.
Read More