ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು.
ಶ್ರೋತ್ರನಾಶದಲ್ಲಿ ಜಯಸ್ವರದ ಪಾಡಿದಂತಾಯಿತ್ತು.
ಬೆಳ್ಳ, ಹಣ್ಣಿಂಗೆ ತಾಳಿದ ದೃಷ್ಟದಂತಾಯಿತ್ತು.
ನಾ ಬಂದ ಲೀಲೆಯನಿನ್ನಾರಿಗೆ ಹೇಳುವೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Enna māṭa, kuruḍa sabheyallirdu nagenakkantāyittu.
Śrōtranāśadalli jayasvarada pāḍidantāyittu.
Beḷḷa, haṇṇiṅge tāḷida dr̥ṣṭadantāyittu.
Nā banda līleyaninnārige hēḷuve,
niḥkaḷaṅka mallikārjunā.