ಕಂಡೆನೊಂದು ನೆಟ್ಟ ಶೂಲವ, ಮೊದಲೊಂದು, ತುದಿಮೂರು.
ಆ ಮೂರರ ತುದಿಯಲ್ಲಿ ಆರು ಸೂನಿಗೆ.
ಆರು ಸೂನಿಗೆಯ ಮೇಲೆ ಇಪ್ಪತ್ತೈದು ಹೆಣ ತೆಗೆಯಿತ್ತು.
ಹೆಣನೂದಿ ರುಧಿರ ಸುರಿಯಲಾಗಿ,
ಅದರ ಭಾರ ತಾಗಿ, ಸೂನಗೆ ಮುರಿಯಿತ್ತು.
ಸೂನಗೆ ಕಾಣಬಾರದು, ಹೆಣ ಬಯಲಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Kaṇḍenondu neṭṭa śūlava, modalondu, tudimūru.
Ā mūrara tudiyalli āru sūnige.
Āru sūnigeya mēle ippattaidu heṇa tegeyittu.
Heṇanūdi rudhira suriyalāgi,
adara bhāra tāgi, sūnage muriyittu.
Sūnage kāṇabāradu, heṇa bayalāyittu,
niḥkaḷaṅka mallikārjunā.