•  
  •  
  •  
  •  
Index   ವಚನ - 198    Search  
 
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ, ಅಳಲುತ್ತ ಬಳಲುತ್ತಲೈದಾರೆ. ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ. ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು. ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ. ವಿಷ್ಣುವಿನ ನಾಭಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ. ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು. ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ. ಕುರಿ ಸಾಯದು, ಕಂಬಳಿ ಹರಿಯದು. ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ.
Transliteration Kambaḷiya harikinalli chattīsakōṭidēvarkaḷellarū sikki, aḷalutta baḷaluttalaidāre. Ā kambaḷiyalli mahārudranud'dharisida. Mahārudrana kapāladalli iṣṭārthavemba śakti huṭṭidaḷu. Ā śaktiya yōnikamaladalli viṣṇu huṭṭida. Viṣṇuvina nābhikamala madhyadalli brahma huṭṭida. Brahmana sr̥ṣṭiyānta kaiyalli sakalabahurūpaṅgaḷu huṭṭidavu. Āḍutirdarayyā kambaḷiya harikina madhyadalli. Kuri sāyadu, kambaḷi hariyadu. Idakkan̄jutiddēne niḥkaḷaṅka mallikārjunā.