ಕತ್ತಿಯನೆತ್ತಿ ಕೊಲೆಗೆಣಿಸಿದಡೆ,
ಕಲ್ಪಿತವ ತೊಡುವುದು ಕತ್ತಿಯೋ, ಹೊತ್ತವನೋ ?
ಈ ಉಭಯದ ಚಿತ್ರವನರಿದಡೆ,
ಆತ ಮುಕ್ತಿಗೆ ಹೊರಗು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Kattiyanetti kolegeṇisidaḍe,
kalpitava toḍuvudu kattiyō, hottavanō?
Ī ubhayada citravanaridaḍe,
āta muktige horagu, niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.