•  
  •  
  •  
  •  
Index   ವಚನ - 222    Search  
 
ಕಲ್ಲಿನೊಳಗಣ ದಳ್ಳುರಿ, ಹುಳ್ಳಿಯ ಕಿಚ್ಚಿನಂತೆ ಅಲ್ಲಿಯೇ ಉರಿಯಬಲ್ಲುದೆ ? ಕ್ರೀಯಲ್ಲಿಗೆ ಸ್ಥಲ, ಜ್ಞಾನದಲ್ಲಿಗೆ ಕೂಟ, ಸ್ವಾನುಭಾವದಲ್ಲಿಗೆ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Kallinoḷagaṇa daḷḷuri, huḷḷiya kiccinante alliyē uriyaballude? Krīyallige sthala, jñānadallige kūṭa, svānubhāvadallige nirlēpa, niḥkaḷaṅka mallikārjunā.