ಕುಸುಮದಲ್ಲಿ ವಾಸನೆಯಿದ್ದಡೇನು
ಅದು ಎಸೆಯದನ್ನಕ್ಕರ ?
ಕುಶಲನಲ್ಲಿ ರಸಿಕವಿದ್ದಡೇನು ಅದು ಎಸಗದನ್ನಕ್ಕರ ?
ಕುಟಿಲದ ವಸ್ತು ಕೈಯಲ್ಲಿದ್ದಡೇನು,
ಅದು ಒಸೆದು ಪ್ರಾಣವ ಬೆರ[ಸದ]ನ್ನಕ್ಕರ ?
ಇಂತೀ ಹುಸಿನುಸುಳ ಕಲಿತು ಬೆರಸಿದೆ ಲಿಂಗವನೆಂದಡೆ,
ಕಟ್ಟೋಗರದ ಮೊಟ್ಟೆಯಂತೆ, ಬಿಟ್ಟ ಶಕಟದಂತೆ,
ತೃಷೆಯ ಗಡಿಗೆಯಂತೆ, ಇದು ಸಹಜವಲ್ಲ ಲಿಂಗೈಕ್ಯರಿಗೆ
ನಿಃಕಳಂಕ ಮಲ್ಲಿಕಾರ್ಜುನಾ.
Transliteration Kusumadalli vāsaneyiddaḍēnu
adu eseyadannakkara?
Kuśalanalli rasikaviddaḍēnu adu esagadannakkara?
Kuṭilada vastu kaiyalliddaḍēnu,
adu osedu prāṇava bera[sada]nnakkara?
Intī husinusuḷa kalitu beraside liṅgavanendaḍe,
kaṭṭōgarada moṭṭeyante, biṭṭa śakaṭadante,
tr̥ṣeya gaḍigeyante, idu sahajavalla liṅgaikyarige
niḥkaḷaṅka mallikārjunā.