ಕೂಟಗೆಯ ಕೂಳನುಣ್ಣಬಂದವರೆಲ್ಲರೂ ಅಜಾತನ ನಿಲವ ಬಲ್ಲರೆ ?
ಬೇಟದ ಕಣ್ಣಿನವರೆಲ್ಲರೂ ಸಕಳೇಶನ ಬಲ್ಲರೆ ?
ಈ ಷಣತ್ರಯವ ಕೂಡುವರೆಲ್ಲರೂ ಪರದೇಶಿಗನ ಕೂಡಬಲ್ಲರೆ ?
ಆಶೆಯೆಂಬ ಕೊಳದಲ್ಲಿದ್ದು, ನಿರಾಶೆಯ ನಿರ್ನಾಮವ ಬಲ್ಲರೆ ?
ದೋಷದೂರ ನಿರ್ಜಾತನು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Kūṭageya kūḷanuṇṇabandavarellarū ajātana nilava ballare?
Bēṭada kaṇṇinavarellarū sakaḷēśana ballare?
Ī ṣaṇatrayava kūḍuvarellarū paradēśigana kūḍaballare?
Āśeyemba koḷadalliddu, nirāśeya nirnāmava ballare?
Dōṣadūra nirjātanu nīne, niḥkaḷaṅka mallikārjunā.