•  
  •  
  •  
  •  
Index   ವಚನ - 295    Search  
 
ಕ್ರೂರ, ಮೃಗ, ಜಾರ, ಚೋರ, ಸಂದಣಿಗ, ಭಂಡ, ಚಾರ್ವಕ, ಸರ್ವಪಾತಕ, ಸುರಾಪಾನಭುಂಜಕ, ಪಣ್ಯಾಂಗನಾಸಂಗಿ, ಇಂತಿವರಲ್ಲಿ ತತ್ವಭಾವವ ಭಾವಿಸಿ ವ್ಯಕ್ತೀಕರಿಸಿದರೆ, ದೃಷ್ಟಿಯಲ್ಲಿ ಇದಿರಾಗಿ ಹೊತ್ತು ನುಡಿದಡೆ, ಆ ಭಕ್ತಂಗೆ ಭಕ್ತಿಯಿಲ್ಲ, ಮುಕ್ತಂಗೆ ಮುಕ್ತಿಯಿಲ್ಲ, ಜ್ಞಾನಿಗೆ ಜ್ಞಾನವಿಲ್ಲ. ಸತಿಪತಿಸಂಯೋಗ ಸುಸಂಗವಲ್ಲದೆ, ದುಸ್ಸಂಗದಿಂದ, ವ್ಯಾಪಾರದಿಂದ ನುಡಿಯಬಹುದೆ ? ಬಲ್ಲವನಾದೆಹೆನೆಂದು ಅಲ್ಲಿಗಲ್ಲಿಗೆ ನುಡಿದಡೆ, ಆತ್ಮನಲ್ಲಿದ್ದುದೇ ದ್ರೋಹ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Krūra, mr̥ga, jāra, cōra, sandaṇiga, bhaṇḍa, cārvaka, sarvapātaka, surāpānabhun̄jaka, paṇyāṅganāsaṅgi, intivaralli tatvabhāvava bhāvisi vyaktīkarisidare, dr̥ṣṭiyalli idirāgi hottu nuḍidaḍe, ā bhaktaṅge bhaktiyilla, muktaṅge muktiyilla, jñānige jñānavilla. Satipatisanyōga susaṅgavallade, dus'saṅgadinda, vyāpāradinda nuḍiyabahude? Ballavanādehenendu alligallige nuḍidaḍe, ātmanalliddudē drōha, niḥkaḷaṅka mallikārjunā.