ಚಕ್ರಿಯ ಚಿತ್ತದಂತೆ, ಚಿತ್ರಜ್ಞನ ಕೈಯ ಲೆಕ್ಕಣಿಕೆಯಂತೆ,
ಅಪ್ಪುವಿನ ಮಡುವಿನ ಮತ್ಸ್ಯದ ಪಥದಂತೆ,
ಇಂತೀ ಭಕ್ತಿಜ್ಞಾನವೈರಾಗ್ಯ ನಿಃಪತಿಯಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ.
Transliteration Cakriya cittadante, citrajñana kaiya lekkaṇikeyante,
appuvina maḍuvina matsyada pathadante,
intī bhaktijñānavairāgya niḥpatiyādalli,
niḥkaḷaṅka mallikārjuna huṭṭugeṭṭa.