ಜಂಗಮವೆಂದು ಮಾಡಿ ಪಂಕ್ತಿಯಲ್ಲಿ ವಿಂಗಡಿಸಿ,
ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ
ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Jaṅgamavendu māḍi paṅktiyalli viṅgaḍisi,
lekkava māḍuva daṇḍada maneyalli kūḷanumba jaṅgamakke
bhaṇḍugelidu bēḍi tanda bhaṇḍana en̄jala tindante,
niḥkaḷaṅka mallikārjunā.