•  
  •  
  •  
  •  
Index   ವಚನ - 371    Search  
 
ತಥ್ಯವುಳ್ಳವಂಗೆ ತತ್ವದ ಮಾತು ನುಡಿದು, ಹೊತ್ತು ಹೋರಲೇಕೆ ? ಭಕ್ತಿಯುಳ್ಳವಂಗೆ ಕೃತ್ಯಕ್ಕೆ ಸಿಕ್ಕಿ ಸುಚಿತ್ತವನರಸಲೇಕೆ ? ಚಿತ್ತದ ಕಲೆಯ ಬಲ್ಲ ವಿರಕ್ತನೆನಿಸಿಕೊಂಬವಂಗೆ, ತ್ರಿವಿಧಕ್ಕೆ ಹೊತ್ತು ನಿತ್ತರಿಸಲೇಕೆ ? ಇವರೆಲ್ಲರ ಗುಣ, ಕತ್ತೆ ಹೊರೆಯ ಹೊತ್ತಿರ್ಪುದನರಿಯದೆ, ವಿಷಯಕ್ಕೆ ಹರಿವ ಅದರಚ್ಚಿಗದಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Tathyavuḷḷavaṅge tatvada mātu nuḍidu, hottu hōralēke? Bhaktiyuḷḷavaṅge kr̥tyakke sikki sucittavanarasalēke? Cittada kaleya balla viraktanenisikombavaṅge, trividhakke hottu nittarisalēke? Ivarellara guṇa, katte horeya hottirpudanariyade, viṣayakke hariva adaraccigadantāyittu, niḥkaḷaṅka mallikārjunā. Read More