•  
  •  
  •  
  •  
Index   ವಚನ - 408    Search  
 
ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ ದೋಷಕ್ಕಂಜಿ ಧರ್ಮವ ಮಾಡುವ, ಬೇಡುವ ಕಾಟಕ್ಕಂಜಿ, ತ್ರಿವಿಧವ ಕೊಡುವ ನಾಟರಿಗೇಕೊ ಸದ್ಭಕ್ತಿ ? ಜಗದ ಘಾತಕರ ಘಾತಿಸದೆ, ವಿಷಯವನರಿಯದೆ, ಆಶೆಯಲ್ಲಿ ಸುಳಿವ ಭ್ರಾಂತು ಮಾರಿಗಳನೇನೆಂದರಿಯದೆ, ವಸ್ತುವಿನಲ್ಲಿ ಓತಿರ್ಪ ಸಾತ್ವಿಕರನರಿದು ಸದ್ಭಕ್ತಿಯ ಮಾಡುವುದು. ಅರಿದುದಕ್ಕೆ ಇದೇ ಕುರುಹೆಂದು, ಮರೆಯೊಳಡಗಿ ಮೊರೆಯಿಡುತ್ತಿದ್ದೇನೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Daṇḍakkan̄ji, jaṅgamakke ikkuva dōṣakkan̄ji dharmava māḍuva, bēḍuva kāṭakkan̄ji, trividhava koḍuva nāṭarigēko sadbhakti? Jagada ghātakara ghātisade, viṣayavanariyade, āśeyalli suḷiva bhrāntu mārigaḷanēnendariyade, vastuvinalli ōtirpa sātvikaranaridu sadbhaktiya māḍuvudu. Aridudakke idē kuruhendu, mareyoḷaḍagi moreyiḍuttiddēne, niḥkaḷaṅka mallikārjunā.