ನೂಲೆಳೆಯ ಗಾತ್ರದ ಮರದಲ್ಲಿ, ಬೆಟ್ಟದ ತೋರದ ಕಾಯಿ ಫಲವಾಯಿತ್ತು.
ಅದು ಹಣ್ಣಾಗದು, ನೋಡಿರಯ್ಯಾ ಇನ್ನೆಂತೊ ?
ಏರಬಾರದು ಮರನ, ಕೊಯ್ದು ಹಿಡಿಯಬಾರದು ಕಾಯ.
ಈ ಭೇದವನರಿದು ಮರನನೇರದೆ, ಕಾಯ ಮುಟ್ಟದೆ,
ಹಣ್ಣಿನ ರುಚಿಯ ಚೆನ್ನಾಗಿ ಬಲ್ಲಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗ ತನ್ನಲ್ಲಿ ನಿರ್ಲೇಪಸಂಬಂಧಿ.
Transliteration (Vachana in Roman Script)Nūleḷeya gātrada maradalli, beṭṭada tōrada kāyi phalavāyittu.
Adu haṇṇāgadu, nōḍirayyā innento?
Ērabāradu marana, koydu hiḍiyabāradu kāya.
Ī bhēdavanaridu marananērade, kāya muṭṭade,
haṇṇina ruciya cennāgi ballaḍe,
niḥkaḷaṅka mallikārjunaliṅga tannalli nirlēpasambandhi. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.