ಪ್ರಮಾಣಿಸಿ ಅವಧರಿಸಿ ಮಾಡುವಂಗೆ,
ಮಾಡುವ ದ್ರವ್ಯಕ್ಕೆ ಹೇಗೆಂದು ಮನಗುಂದದಿರಬೇಕು.
ನೀಡಿದ ಮತ್ತೆ, ನಿಜವಸ್ತುವಿನಲ್ಲಿರಬೇಕು.
ಕೂಡಿದ ಮತ್ತೆ, ಹಿಂದಣ ಹಂಗ ಹರಿದು, ಸಂದಳಿದು
ಅಂದಂದಿಗೆ ಬಂದುದ ಕಂಡು, ಬಾರದುದಕ್ಕೆ ಭ್ರಮೆಯಿಲ್ಲದಿರಬೇಕು.
ಇಂತೀ ಸ್ಥಲ, ಭಕ್ತಂಗೆ.
ಮುಕ್ತಿಯನರಸಿ ಇಪ್ಪವಂಗೆ ಇದೇ ಸತ್ಯಸಮರ್ಪಣ.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸದ್ಭಕ್ತಿ ನಿರ್ಲೇಪ.
Transliteration (Vachana in Roman Script) Pramāṇisi avadharisi māḍuvaṅge,
māḍuva dravyakke hēgendu managundadirabēku.
Nīḍida matte, nijavastuvinallirabēku.
Kūḍida matte, hindaṇa haṅga haridu, sandaḷidu
andandige banduda kaṇḍu, bāradudakke bhrameyilladirabēku.
Intī sthala, bhaktaṅge.
Muktiyanarasi ippavaṅge idē satyasamarpaṇa.
Niḥkaḷaṅka mallikārjunanalli sadbhakti nirlēpa.
Read More