ಪ್ರಾಣಲಿಂಗಿಗಳೆಂದು ನುಡಿವ ನಾಚಿಕೆಯಿಲ್ಲದ
ಅಣ್ಣಗಳು ಭಾವಿಸಿರಯ್ಯಾ.
ತನು ಸೋಂಕುವುದಕ್ಕೆ ಮೊದಲೆ, ಮನ ಸೋಂಕಿತ್ತಲ್ಲಾ.
ತನು ಹಿಂಗಿ ಅರ್ಪಿಸುವ ಠಾವಿನ್ನೆಲ್ಲಿಯದೊ?
ಅಂಗವರಿದು ಮನವರಿದುದಿಲ್ಲ. ಅಂಗಲಿಂಗ ಅರ್ಪಿತವೆಂತಾಯಿತ್ತೊ?
ಇಂತೀ ಭಂಗಿತರ ಕಂಡು ಹಿಂಗಿದೆನಯ್ಯಾ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Prāṇaliṅgigaḷendu nuḍiva nācikeyillada
aṇṇagaḷu bhāvisirayyā.
Tanu sōṅkuvudakke modale, mana sōṅkittallā.
Tanu hiṅgi arpisuva ṭhāvinnelliyado?
Aṅgavaridu manavaridudilla. Aṅgaliṅga arpitaventāyitto?
Intī bhaṅgitara kaṇḍu hiṅgidenayyā,
niḥkaḷaṅka mallikārjunā.
Read More