ಬಡವಂಗೆ ನಿಧಾನ ಕಡವರ ಕೈಸಾರಿತ್ತಯ್ಯಾ.
ಕಾಣಬಾರದ ಬಯಲು ರೂಪುಗೊಂಡಿತ್ತಯ್ಯಾ.
ನಿರಾಳ ನಿರ್ಣಯದ ಮೇಲೆ ನಿಂದಿತ್ತಯ್ಯಾ.
ಎನ್ನ ಭಾವದ ಕೊನೆಯ ಮೊನೆಯ ಮೇಲೆ,
ಮನೆಯ ಮಾಡಿಕೊಂಡಿಪ್ಪ ಪ್ರಭುವ ಕಂಡು,
ಬದುಕಿದೆನು ಕಾಣಾ, ನಿಃಕಳಂಕ ಮಲ್ಲಿಕಾರ್ಜುನ.
Transliteration Baḍavaṅge nidhāna kaḍavara kaisārittayyā.
Kāṇabārada bayalu rūpugoṇḍittayyā.
Nirāḷa nirṇayada mēle nindittayyā.
Enna bhāvada koneya moneya mēle,
maneya māḍikoṇḍippa prabhuva kaṇḍu,
badukidenu kāṇā, niḥkaḷaṅka mallikārjuna.