ಬೆಳಗಿಂಗೆ ಬೆಳಗಿನಿತ್ತಡೆ ನೋಡಬಲ್ಲವರಾರು ?
ಸವಿಗೆ ಸ್ವಾದವನಿತ್ತಡೆ ರುಚಿಸಬಲ್ಲವರಾರು ?
ಜ್ಞಾನಕ್ಕೆ ಜ್ಞಾನವ ಹೇಳಿದಡೆ ಕೇಳಬಲ್ಲವರಾರು ?
ಕರ್ತ ನೀನಾಗಿ, ಭೃತ್ಯ ನಾನಾಗಿ ಇದರಚ್ಚುಗವ ಬಿಡಿಸಾ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Beḷagiṅge beḷaginittaḍe nōḍaballavarāru?
Savige svādavanittaḍe rucisaballavarāru?
Jñānakke jñānava hēḷidaḍe kēḷaballavarāru?
Karta nīnāgi, bhr̥tya nānāgi idaraccugava biḍisā,
niḥkaḷaṅka mallikārjunā.