•  
  •  
  •  
  •  
Index   ವಚನ - 560    Search  
 
ಭಕ್ತನಂಗ ಕಾಮ, ಮಹೇಶ್ವರನಂಗ ಲೋಭ, ಪ್ರಸಾದಿಯಂಗ ಕ್ರೋಧ, ಪ್ರಾಣಲಿಂಗಿಯಂಗ ಮೋಹ, ಶರಣನಂಗ ಮದ, ಐಕ್ಯನಂಗ ಮತ್ಸರ. ಇಂತೀ ಷಡ್ಭಾವಸ್ಥಲಂಗಳ ಕೂಡುವಲ್ಲಿ, ಸ್ಥೂಲವ ಕೂಡಿದಂಗ ಭಕ್ತನಾಗಿ, ಸೂಕ್ಷ್ಮವ ಕೂಡಿದಂಗ ಮಾಹೇಶ್ವರನಾಗಿ, ಕಾರಣವ ಕೂಡಿದಂಗ ಪ್ರಸಾದಿಯಾಗಿ, ಇಂತೀ ಮೂರು ಭಕ್ತಿಸ್ವರೂಪವಾಗಿ, ಆ ಸ್ಥೂಲದ ಕಳೆ ಪ್ರಾಣಲಿಂಗಿಯಾಗಿ, ಆ ಸೂಕ್ಷ್ಮದ ಕಳೆ ಶರಣನಾಗಿ, ಆಕಾಶದ ಕಳೆ ಐಕ್ಯನಾಗಿ, ಏಕಮೂರ್ತಿ ತ್ರೈಮೂರ್ತಿಯಾಗಿ, ಭಕ್ತಿಜ್ಞಾನವೈರಾಗ್ಯವೆಂಬುದನಾಧರಿಸಿದೆಯಲ್ಲಾ. ಅದು ನಿನ್ನ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Bhaktanaṅga kāma, mahēśvaranaṅga lōbha, prasādiyaṅga krōdha, prāṇaliṅgiyaṅga mōha, śaraṇanaṅga mada, aikyanaṅga matsara. Intī ṣaḍbhāvasthalaṅgaḷa kūḍuvalli, sthūlava kūḍidaṅga bhaktanāgi, sūkṣmava kūḍidaṅga māhēśvaranāgi, kāraṇava kūḍidaṅga prasādiyāgi, intī mūru bhaktisvarūpavāgi, ā sthūlada kaḷe prāṇaliṅgiyāgi, ā sūkṣmada kaḷe śaraṇanāgi, ākāśada kaḷe aikyanāgi, ēkamūrti traimūrtiyāgi, bhaktijñānavairāgyavembudanādharisideyallā. Adu ninna līlābhāva, niḥkaḷaṅka mallikārjunā.