•  
  •  
  •  
  •  
Index   ವಚನ - 615    Search  
 
ಮತ್ಸ್ಯದ ಮನೆಯ ಕೀಟಕನಂತೆ, ಸಂಸಾರದಲ್ಲಿಯೆ ಹುಟ್ಟಿ, ಸಂಸಾರದಲ್ಲಿಯೆ ಸಾವುತ್ತ, ತೂಳದ ಬೀರರಂತೆ ಅರಿದಲ್ಲಿ ಭಕ್ತನಾಗಿ, ಮರೆದಲ್ಲಿ ಮಾನವನಾಗುತ್ತ, ಇತ್ತಲೆಯ ಸರ್ಪನಂತೆ, ಎತ್ತ ನೋಡಿದರತ್ತ ಕತ್ತಲೆಯ ತೆರನಂತೆ ಇಪ್ಪವರ ಕಂಡು ಭಕ್ತರೆನಲಾರೆ, ವಿರಕ್ತರೆನಲಾರೆ. ಭಕ್ತಿಯುಳ್ಳವ ಮಿಥ್ಯವೆನಿಸಿಕೊಳಲಾರ. ಆ ಉಭಯ ಕೆಟ್ಟ ಕೇಡು, ಎನ್ನ ಸತ್ವದ ಹಾನಿ. ಇದಕ್ಕೆ ನಿಶ್ಚಯವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Matsyada maneya kīṭakanante, sansāradalliye huṭṭi, sansāradalliye sāvutta, tūḷada bīrarante aridalli bhaktanāgi, maredalli mānavanāgutta, ittaleya sarpanante, etta nōḍidaratta kattaleya teranante ippavara kaṇḍu bhaktarenalāre, viraktarenalāre. Bhaktiyuḷḷava mithyavenisikoḷalāra. Ā ubhaya keṭṭa kēḍu, enna satvada hāni. Idakke niścayava hēḷā, niḥkaḷaṅka mallikārjunā.