ಮಧುರವ ಕೂಡಿದ ಜಲವ ತೆಗೆದು
ಭಿನ್ನವ ಮಾಡಬಹುದೆ ಅಯ್ಯಾ ?
ಘಟವ ಹೊದ್ದಿದ ಬೆಳಗ ಪ್ರಕಟಿಸಬಹುದೆ ಅಯ್ಯಾ ?
ಇಂತೀ ಉಭಯದ ತೆರದಂತೆ ಪ್ರಾಣಲಿಂಗಿಯ ಸಂಬಂಧದ ಇರವು.
ಮಾತಿನ ಮಾಲೆಯಿಂದ, ನೀತಿಯಲ್ಲಿ ಕಾಬ ವಾದದಿಂದ,
ಇಂತಿವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನ ?
Transliteration (Vachana in Roman Script) Madhurava kūḍida jalava tegedu
bhinnava māḍabahude ayyā?
Ghaṭava hoddida beḷaga prakaṭisabahude ayyā?
Intī ubhayada teradante prāṇaliṅgiya sambandhada iravu.
Mātina māleyinda, nītiyalli kāba vādadinda,
intivarigētakkoliva, niḥkaḷaṅka mallikārjuna?
Read More