ಮನಸ್ಸು ಏತರಿಂದ ಅರಿವುದು ಲಿಂಗವನು ?
ಬುದ್ಧಿ ಏತರಿಂದ ಅರಿವುದು ಮನಸ್ಸನು ?
ಚಿತ್ತ ಏತರಿಂದ ಅರಿವುದು ಬುದ್ಧಿಯ ?
ಅಹಂಕಾರ ಏತರಿಂದ ಅರಿವುದು ಚಿತ್ತವನು ?
ಈ ಚತುಷ್ಟಯವ ಏತರಿಂದ ಅರಿವೆ ? ಒಂದಕ್ಕೊಂದು ಹಂದಿಲ್ಲದೆ ಕಾಣೆ.
ಒಂದನೆಣಿಸಿ ಎಣಿಕೆಗೆ ತುಂಬಿದ ಮತ್ತೆ, ಮತ್ತೊಂದೆಂದಲ್ಲದೆ ಸಂಗವಿಲ್ಲ ಲೆಕ್ಕ.
ಇದರಂದದ ತೆರ ಲಿಂಗ.
ಇದ ಸಂಗಂಗೊಳಿಸು, ಭಂಗಿತನಾಗಲಾರೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Manas'su ētarinda arivudu liṅgavanu?
Bud'dhi ētarinda arivudu manas'sanu?
Citta ētarinda arivudu bud'dhiya?
Ahaṅkāra ētarinda arivudu cittavanu?
Ī catuṣṭayava ētarinda arive? Ondakkondu handillade kāṇe.
Ondaneṇisi eṇikege tumbida matte, mattondendallade saṅgavilla lekka.
Idarandada tera liṅga.
Ida saṅgaṅgoḷisu, bhaṅgitanāgalāre,
niḥkaḷaṅka mallikārjunā.