ಮಾಡಿ ಮರುಗುವ, ನೀಡಿ ನಿಜವಿಲ್ಲದೆ ಇಹ,
ಕೊಟ್ಟು ಹೊಟ್ಟೆ ರೋಗವಿಕ್ಕುವ ಘಟ್ಟುವಿನ ಇರವು,
ಬಟ್ಟೆಬಡಿದುಂಬ ಹೊಟ್ಟೆಹೊರಕ ಮಾಡುವ ಭಕ್ತಿ.
ಮೆಟ್ಟುಗುಳಿಯಲ್ಲಿ ನಿಂದು ತುತ್ತ ನುಂಗಿದಂತೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Māḍi maruguva, nīḍi nijavillade iha,
koṭṭu hoṭṭe rōgavikkuva ghaṭṭuvina iravu,
baṭṭebaḍidumba hoṭṭehoraka māḍuva bhakti.
Meṭṭuguḷiyalli nindu tutta nuṅgidante,
niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.