ಮೂಗೇಣಗಲದ ಬಾವಿಗೆ, ಆರು ಗೇಣಗಲದ ಗಾತ್ರದ ಕುಂಭವ ಬಿಟ್ಟು,
ಹುರಿಗೂಡದ ಕಣ್ಣಿಯಲ್ಲಿ ಸೇದುತ್ತಿರಲಾಗಿ,
ನೀರು ನೆಲನ ಮುಟ್ಟದೆ,. ಕುಂಭವ ಬಿಟ್ಟು,
ಕಣ್ಣಿಯಲ್ಲಿ ತುಂಬಬಂದಿತ್ತು,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಗೆ.
Transliteration Mūgēṇagalada bāvige, āru gēṇagalada gātrada kumbhava biṭṭu,
hurigūḍada kaṇṇiyalli sēduttiralāgi,
nīru nelana muṭṭade,. Kumbhava biṭṭu,
kaṇṇiyalli tumbabandittu,
niḥkaḷaṅka mallikārjunaliṅgadallige.