•  
  •  
  •  
  •  
Index   ವಚನ - 664    Search  
 
ರಸ ಆತ್ಮನಂಗ, ಗಂಧ ವಾಯುವಿನಂಗ, ರೂಪು ಭಾವದಂಗ, ಶಬ್ದ ಆಕಾಶದಂಗ, ಸ್ಪರ್ಶ ಪೃಥ್ವಿಯಂಗವಾಗಿ ಅಂಗೀಕರಿಸುವಲ್ಲಿ, ಪಂಚೇಂದ್ರಿಯಮುಖಂಗಳಿಂದ ಅರ್ಪಿಸಿಕೊಂಬವನಾರು ಹೇಳಾ. ಅದು ಸ್ಥಾಣು ಚೋರನಂತೆ, ರಜ್ಜು ಸರ್ಪನಂತೆ, ತಿಳಿದು ನೋಡಲಿಕೆ ಮತ್ತಲ್ಲಿ ಏನೂ ಇಲ್ಲ. ತನ್ನರಿದು ಮುಟ್ಟುವಲ್ಲಿ ತಾನು ತಾನೆ. ತನ್ನನರಿಯದೆ ಮುಟ್ಟುವಲ್ಲಿ, ಇಂದ್ರಿಯಂಗಳು ಅನ್ಯಭಿನ್ನವಾಗಿಹವು. ಅನ್ಯವಿಲ್ಲದೆ ಚೆನ್ನಾಗಿ ತಿಳಿದು ನೋಡಲಾಗಿ, ಅಭಿನ್ನಮೂರ್ತಿ ನಿಃಕಳಂಕ ಮಲ್ಲಿಕಾರ್ಜುನ, ತಾನು ತಾನೆ.
Transliteration (Vachana in Roman Script) Rasa ātmanaṅga, gandha vāyuvinaṅga, rūpu bhāvadaṅga, śabda ākāśadaṅga, sparśa pr̥thviyaṅgavāgi aṅgīkarisuvalli, pan̄cēndriyamukhaṅgaḷinda arpisikombavanāru hēḷā. Adu sthāṇu cōranante, rajju sarpanante, tiḷidu nōḍalike mattalli ēnū illa. Tannaridu muṭṭuvalli tānu tāne. Tannanariyade muṭṭuvalli, indriyaṅgaḷu an'yabhinnavāgihavu. An'yavillade cennāgi tiḷidu nōḍalāgi, abhinnamūrti niḥkaḷaṅka mallikārjuna, tānu tāne. Read More