ರಾಜರಲ್ಲಿ ಹೊಕ್ಕ ಮತ್ತೆ, ಅವರ ಆಗುಚೇಗೆಯ ಹೇಳಬೇಕು.
ಬೇಗೆಯ ಅಳರಿನಲ್ಲಿ ಹೊಕ್ಕ ಮತ್ತೆ, ಸೂಡಿಗೆ ಅಂಜಲೇಕೆ?
ಸುಖವ ಮೆಚ್ಚಿ ಅಖಿಳರೊಡನೆ ಬೆರಸಿದ ಮತ್ತೆ, ಅಕಳಂಕತನವುಂಟೆ ?
ಇಂತೀ ಬಕಧ್ಯಾನಿಗಳ ಧ್ಯಾನ, ಮಕರದ ಒಲುಮೆಯಂತೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Rājaralli hokka matte, avara āgucēgeya hēḷabēku.
Bēgeya aḷarinalli hokka matte, sūḍige an̄jalēke?
Sukhava mecci akhiḷaroḍane berasida matte, akaḷaṅkatanavuṇṭe?
Intī bakadhyānigaḷa dhyāna, makarada olumeyante,
niḥkaḷaṅka mallikārjunā.