ಲಿಂಗವ ಕೈಯಲ್ಲಿ ಹಿಡಿದು, ಭಕ್ತರಂಗಣವ ಕಾಯಲೇತಕ್ಕೋ ?
ಲಿಂಗವ ಕೈಯಲ್ಲಿ ಹಿಡಿದು, ಅವರಂಗದಿಚ್ಫೆಯ ನುಡಿದು,
ತನ್ನ ದಿಂಡ ಹೊರೆಯಲೇತಕ್ಕೋ ?
ಸಂದನಳಿದ ಸದಮಲಾನಂದಂಗೆ ಇದರಿಂದ ಒಂದೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Liṅgava kaiyalli hiḍidu, bhaktaraṅgaṇava kāyalētakkō?
Liṅgava kaiyalli hiḍidu, avaraṅgadicpheya nuḍidu,
tanna diṇḍa horeyalētakkō?
Sandanaḷida sadamalānandaṅge idarinda ondū illa,
niḥkaḷaṅka mallikārjunā.