ಲೀಲೆಯರತು ಆಡುವರೆಲ್ಲರು,
ಕಾಲಸಂಹಾರನ ಬಂಧುಗಳು.
ಲೀಲಾಂಗನಾ ಸುಖವ ಕುರಿತು ಆಡುವರೆಲ್ಲರು,
ಲೋಲೆಯ ಬಂಧುಗಳು.
ಶೈಲಾಂಗನಾ ಲೀಲೆಯನಾಡುವರೆಲ್ಲರು,
ಕಾಲನ ಬಂಧುಗಳು.
ಲೀಲೆಯ ಜಾಳಿಸಾ, ಅಂಕಸೂನೆಗಾರ
ನಿಃಕಳಂಕ ಮಲ್ಲಿಕಾರ್ಜುನಾ.
Transliteration Līleyaratu āḍuvarellaru,
kālasanhārana bandhugaḷu.
Līlāṅganā sukhava kuritu āḍuvarellaru,
lōleya bandhugaḷu.
Śailāṅganā līleyanāḍuvarellaru,
kālana bandhugaḷu.
Līleya jāḷisā, aṅkasūnegāra
niḥkaḷaṅka mallikārjunā.