ವರ್ತನ ಶುದ್ಧವಾದಲ್ಲಿ ಭಕ್ತಸ್ಥಲವಾಯಿತ್ತು.
ಕ್ರೀಭಾವ ಶುದ್ಧವಾದಲ್ಲಿ ಮಾಹೇಶ್ವರಸ್ಥಲವಾಯಿತ್ತು.
ನಡೆನುಡಿ ಶುದ್ಧವಾಗಲಾಗಿ ಪ್ರಸಾದಿಸ್ಥಲವಾಯಿತ್ತು.
ಕಾಯ ಜೀವದ ಭೇದವನರಿಯಲಿಕ್ಕೆ ಪ್ರಾಣಲಿಂಗಿಸ್ಥಲವಾಯಿತ್ತು.
ಸಕಲವನರಿದು ಹಿಡಿದು ಬಿಡುವಲ್ಲಿ ಶರಣಸ್ಥಲವಾಯಿತ್ತು.
ಇಂತೀ ಐದರಲ್ಲಿ ಏರಿ ಭೇದವಿಲ್ಲದೆ
ನಿರಾಕರಿಸಿನಿಂದಲ್ಲಿಐಕ್ಯಸ್ಥಲವಾಯಿತ್ತು.
ಇಂತೀ ಆರುಸ್ಥಲವನರಿದು,
ಮತ್ತಿವರೊಳಗಾದ ನಾನಾ ಸ್ಥಲಂಗಳ ತಿಳಿದು ನಿಂದ
ಸಂಗನಬಸವಣ್ಣಂಗೆ, ಚೆನ್ನಬಸವಣ್ಣಂಗೆ, ಪ್ರಭು, ಮಡಿವಾಳಯ್ಯಂಗೆ,
ನಮೋ ನಮೋ ಎನುತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Vartana śud'dhavādalli bhaktasthalavāyittu.
Krībhāva śud'dhavādalli māhēśvarasthalavāyittu.
Naḍenuḍi śud'dhavāgalāgi prasādisthalavāyittu.
Kāya jīvada bhēdavanariyalikke prāṇaliṅgisthalavāyittu.
Sakalavanaridu hiḍidu biḍuvalli śaraṇasthalavāyittu.
Intī aidaralli ēri bhēdavillade
nirākarisinindalli'aikyasthalavāyittu.
Intī ārusthalavanaridu,
mattivaroḷagāda nānā sthalaṅgaḷa tiḷidu ninda
saṅganabasavaṇṇaṅge, cennabasavaṇṇaṅge, prabhu, maḍivāḷayyaṅge,
namō namō enutidde, niḥkaḷaṅka mallikārjunā.