ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ,
ಅದು ತನ್ನ ನೆಲೆಯೋ ? ಆತ್ಮನ ಭೇದವೋ ? ಎಂಬುದ ತಾನರಿತಲ್ಲಿ,
ಇಷ್ಟಲಿಂಗಕ್ಕೆ ದೃಷ್ಟವ ಕೊಟ್ಟು, ಆತ್ಮಲಿಂಗಕ್ಕೆ ತೃಪ್ತಿಯ ಕೊಟ್ಟು,
ನಿಶ್ಚಯಿಸಿಕೊಂಡೆಹೆನೆಂಬುದು ಅದೇನು ಹೇಳಾ.
ಉಭಯಭಿನ್ನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Vastuva muṭṭi ihaparadalli sukhiyādenembannabara,
adu tanna neleyō? Ātmana bhēdavō? Embuda tānaritalli,
iṣṭaliṅgakke dr̥ṣṭava koṭṭu, ātmaliṅgakke tr̥ptiya koṭṭu,
niścayisikoṇḍ'̔ehenembudu adēnu hēḷā.
Ubhayabhinnavuḷḷannakka prāṇaliṅgiyalla,
niḥkaḷaṅka mallikārjunā.