ವಾರಿಧಿಯ ಹೊಯ್ದು ಬೇರ್ಪಡಿಸಬಹುದೆ ?
ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ?
ಮಹಾಘನವನರಿವುದಕ್ಕೆ ಮೊದಲೆ,
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ?
ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ?
ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು,
ನಿಃಕಳಂಕ ಮಲ್ಲಿಕಾರ್ಜುನಾ ?
Transliteration Vāridhiya hoydu bērpaḍisabahude?
Phaladoḷagaṇa bīja balivudakke modale tegeyabahude?
Mahāghanavanarivudakke modale,
bhakta māhēśvara prasādi prāṇaliṅgi śaraṇa aikyanaha pari innento?
Ikṣudaṇḍa balivudakke modale tanirasa bahude?
Nānembudakke sthāṇu, ahudakke bhāvada balike innāvudu,
niḥkaḷaṅka mallikārjunā?