•  
  •  
  •  
  •  
Index   ವಚನ - 758    Search  
 
ಸುಧೆಯಿದ್ದಂತೆ ಸುರೆಗೆ ಆಸೆ ಮಾಡುವನಂತೆ, ರತಿಯಂತಿಪ್ಪ ಸತಿಯಿರ್ದ ಪತಿ, ತೊತ್ತಿಂಗೆ ಮನವಿಟ್ಟು ಗತಿಗೆಡುವಂತೆ, ಘೃತವಿದ್ದಂತೆ ಉನ್ಮತ್ತದ ರಸಕ್ಕೆ ಬಾಯ ಬಿಡುವಂತೆ, ರಸವಿದ್ದಂತೆ [ಬಳು]ಕುವ ಕಾ[ಂಸ್ಯ]ವ ಗಳಿಸುನಂತೆ, ಇಂತೀ ರಸಿಕವನಾರು ಬಲ್ಲರು ? ಎಸಕದ ಒಲುಮೆ ನಾನೋ, ನೀನೋ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration Sudheyiddante surege āse māḍuvanante, ratiyantippa satiyirda pati, tottiṅge manaviṭṭu gatigeḍuvante, ghr̥taviddante unmattada rasakke bāya biḍuvante, rasaviddante [baḷu]kuva kā[nsya]va gaḷisunante, intī rasikavanāru ballaru? Esakada olume nānō, nīnō, niḥkaḷaṅka mallikārjunā?