ಸೂತ್ರವನಾಡಿಸುವುದೇತರ ಸತ್ವ?
ನೀತಿಯ ಗುಣವೊ? ಅದರೊಳಗಿರ್ಪ ಧಾತುವಿನ ಗುಣವೊ?
ಆಡಿಸುವಾತನ ಗುಣವೊ? ಓತು ನಿಂದ ಕಂಬದಾಶ್ರಯದ ಗುಣವೊ?
ಅದನೇತರಿಂದರಿವೆ.
ಒಂದನಹುದು, ಒಂದನಲ್ಲಾ ಎನಬಾರದು.
ಇದರ ಸಂದು ಸಂಶಯವ ಬಿಡಿಸಾ,
ದ್ವಂದ್ವರಹಿತ ನಿಃಕಳಂಕ ಮಲ್ಲಿಕಾರ್ಜುನಾ.
Transliteration Sūtravanāḍisuvudētara satva?
Nītiya guṇavo? Adaroḷagirpa dhātuvina guṇavo?
Āḍisuvātana guṇavo? Ōtu ninda kambadāśrayada guṇavo?
Adanētarindarive.
Ondanahudu, ondanallā enabāradu.
Idara sandu sanśayava biḍisā,
dvandvarahita niḥkaḷaṅka mallikārjunā.