ಹಲವು ಬಹುರೂಪ ಬರೆದ ಕರದ ಕಡ್ಡಿಯ ಭೇದದಂತೆ,
ಮನವರಿದು, ಕಣ್ಣು ನೋಡಿ, ಕೈ ಕಡ್ಡಿಯ ಹಿಡಿದು ಲಕ್ಷಿಸುವಂತೆ,
ಸ್ಥಲದಲ್ಲಿ ನಿಂದು, ಅರಿವಿನಲ್ಲಿ ಆಶ್ರಯಿಸಿ,
ಇಷ್ಟ ವಿಶ್ವಾಸ ಭಕ್ತಿಯೊಳಗಡಗಿ, ಭಕ್ತಿ ವಸ್ತುವಿನಲ್ಲಿ ಲೇಪವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿರ್ಲೆಪವಾಯಿತ್ತು.
Transliteration (Vachana in Roman Script)Halavu bahurūpa bareda karada kaḍḍiya bhēdadante,
manavaridu, kaṇṇu nōḍi, kai kaḍḍiya hiḍidu lakṣisuvante,
sthaladalli nindu, arivinalli āśrayisi,
iṣṭa viśvāsa bhaktiyoḷagaḍagi, bhakti vastuvinalli lēpavādalli,
niḥkaḷaṅka mallikārjunaliṅga nirlepavāyittu.
Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.