ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು
ಮುಂತಾದ ಫಲಾಹಾರಮಂ ಕೊಂಡು,
ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು,
ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ.
ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ,
ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು,
ಇವರಿಗೆ ಅರಿಕೆಯಿಲ್ಲವೆಂದೆ.
ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ.
ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Hasiva kondihevendu tuppa hālu sakkare haṇṇu
muntāda phalāhāramaṁ koṇḍu,
phalakke bārevendu balōttarava nuḍidu,
ballavarādevemba gellagūḷigaḷu nīvu kēḷiro.
Uriva beṅkige tariduppa tila modalādavaru hāki,
analana keḍisihevemba kalikeya mātina nere bālakara kaṇḍu,
ivarige arikeyillavende.
Garikeyanagedu koraḍanirisidante, idārigeyū aghaṭita nōḍā.
Prakaṭadūra sakīlasāra mukuraguṇanidhiye,
niḥkaḷaṅka mallikārjunā.
Read More