•  
  •  
  •  
  •  
Index   ವಚನ - 782    Search  
 
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮರ್ತ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮರ್ತ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
Transliteration Hinde nī bande nānā bhavaṅgaḷalli, nānā vyāpārakke nīnoḍeyanāgi. Martyada sukhaduḥkha ninage niścintavāgippudu. Hinde ninnante nā bandu nondudilla. Bande nā basavaṇṇana kathanadinda, nā tanda padārthavellava nimagitte. Nāninnan̄juve guruliṅgajaṅgamadalli pratyuttarakke. Enage martyada maṇiha, kr̥tyavinneṣṭu dina hēḷā. Andu nīvu koṭṭa oppada cīṭanoppiside. Matte innu sandēhave, hēḷā niḥkaḷaṅka mallikārjunā.