ಹೆಣ್ಣು ಹೊರಗಣದೆಂದು, ಹೊನ್ನು ಹೊರಗಣದೆಂದು,
ಮಣ್ಣು ಹೊರಗಣದೆಂದು ಸುಬೋಧೆಯ ಇದಿರಿಗೆ ಹೇಳಿ,
ದುರ್ಬೋಧೆಯಲ್ಲಿ ತಾವು ನಡೆವುತ್ತಿಹ ದುರ್ಗುಣಿಗಳ ಕಂಡು,
ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration Heṇṇu horagaṇadendu, honnu horagaṇadendu,
maṇṇu horagaṇadendu subōdheya idirige hēḷi,
durbōdheyalli tāvu naḍevuttiha durguṇigaḷa kaṇḍu,
nācikeyāyittu, niḥkaḷaṅka mallikārjunā.