ಅರಿವಿನ ನಿರಿಗೆಗಾಣದೆ
ಗಿರಿಯ ಕೋಡುಗಲ್ಲ ಮೇಲೆ
ತಲೆಯೂರಿ ತಪಸ್ಸು ಮಾಡಿದಡಿಲ್ಲ,
ಇಲ್ಲದ ಕಾಲಕ್ಕಿಲ್ಲ, ಗಾತ್ರವ ದಂಡಿಸಿದಡಿಲ್ಲ
ಪೃಥ್ವಿಯ ತಿರುಗಿದಡಿಲ್ಲ,
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ
ಜಪಸಮಾಧಿಯಲ್ಲಿ ನಿಂದಡಿಲ್ಲ,
``ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ|
ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಮ್||
ಎಂದುದಾಗಿ,
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ,
ಚಿತ್ತು ಲಯವಾದಡೆ ನಿತ್ಯಪ್ರಕಾಶ!
ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ?
Transliteration Arivina nirigegāṇade
giriya kōḍugalla mēle
taleyūri tapas'su māḍidaḍilla,
illada kālakkilla, gātrava daṇḍisidaḍilla
pr̥thviya tirugidaḍilla,
tīrthaṅgaḷa mindu nityanēmaṅgaḷa māḍi
japasamādhiyalli nindaḍilla,
``pūjākōṭisamaṁ stōtraṁ, stōtrakōṭisamaṁ japaḥ|
japakōṭi samaṁ dhyānaṁ, dhyānakōṭirmanō layam||
endudāgi,
suttisuḷiva manava cittinallirisi,
cittu layavādaḍe nityaprakāśa!
Guhēśvaraliṅgava matte arasaluṇṭe?
Hindi Translation ज्ञान की रचना बिना देखे गिरि कि चोटी पर
सिर रखकर तपस्या करे तो नहीं, न रहने समय का नहीं;
शरीर को दंड देने से नहीं; पृथ्वी घूमने से नहीं;
तीर्थों में नहाकर नित्यनेम कर
जप समाधि में खड़े तो नहीं,
"पूजा कोटि समंस्तोत्रं, स्तोत्रकोटीसमंजप:।
जप कोटिसमंध्यानं, ध्यान कोटिर्मनोलय:"
कहे तो ,घूम फिरने मन को स्थिर रखकर,
चित्त नाश हो तो नित्य प्रकाश,
गुहेश्वरा लिंग को फिर ढूँढसकते?
Translated by: Eswara Sharma M and Govindarao B N