ಪ್ರಣಮದ ಮಂತ್ರ, ಪ್ರಣಮದ ಯಂತ್ರ,
ಪ್ರಣಮದ ತಂತ್ರ, ಪ್ರಣಮದ ಕಾರ್ಯ,
ಪ್ರಣಮದ ಕರಣ, ಪ್ರಣಮದ ಭಕ್ತಿ,
ಪ್ರಣಮವಲ್ಲದೆ ಅನ್ಯಮಂತ್ರ ತಂತ್ರ ಯಂತ್ರ
ನಿಜಕ್ಕೆ ಸ್ವತಂತ್ರವಿಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Praṇamada mantra, praṇamada yantra,
praṇamada tantra, praṇamada kārya,
praṇamada karaṇa, praṇamada bhakti,
praṇamavallade an'yamantra tantra yantra
nijakke svatantravilla kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.