ಚಿತ್ರದಬೊಂಬೆ ರೂಪಾಗಿದ್ದರೇನು?
ಚೈತನ್ಯವಿಲ್ಲದ ಕಾರಣ ಪ್ರಯೋಜನವಾದುದಿಲ್ಲ.
ಹಾವುಮೆಕ್ಕೆಯ ಹಣ್ಣು ನುಣ್ಣಾಗಿದ್ದರೇನು?
ಕಹಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಹತ್ತಿಯ ಹಣ್ಣು ಕಳಿತಿದ್ದರೇನು?
ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ತಿಪ್ಪೆಯಗುಂಡಿಯ ನೀರು ತಿಳಿದಿದ್ದರೇನು?
ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಭಕ್ತನಾದೆನೆಂಬ ಸಂತವ ತಾಳಿದರೇನು?
ತೊತ್ತಿಗೆ ಸಿರಿಬಂದರೇನು?
ಹಿತ್ತಲಿಗೆ ತಳೆಯ ಹಿಡಿಸುವಂತೆ.
ಕರ್ತೃ ಕ್ರೀಯವಿಲ್ಲದವನ ಭಕ್ತಿ ಕತ್ತೆ ನಾಯಂತೆ.
ಅವನಿಗೆ ಸತ್ಯವಿಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Citradabombe rūpāgiddarēnu?
Caitan'yavillada kāraṇa prayōjanavādudilla.
Hāvumekkeya haṇṇu nuṇṇāgiddarēnu?
Kahi biḍada kāraṇa prayōjanakāriyādudilla.
Hattiya haṇṇu kaḷitiddarēnu?
Krimi biḍada kāraṇa prayōjanakāriyādudilla.
Tippeyaguṇḍiya nīru tiḷididdarēnu?
Amēdhya bereda kāraṇa prayōjanakāriyādudilla.
Bhaktanādenemba santava tāḷidarēnu?
Tottige siribandarēnu?
Hittalige taḷeya hiḍisuvante.
Kartr̥ krīyavilladavana bhakti katte nāyante.
Avanige satyavilla kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.