ಉಡಿಯಲಿಂಗವ ಬಿಟ್ಟು,
ಗುಡಿಯಲಿಂಗದ ಮುಂದೆ ನಿಂದು
ನುಡಿಗಳ ಗಡಣವ ಮಾಡುವ
ತುಡುಗುಣಿ ಕಳ್ಳುಗುಡಿ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Uḍiyaliṅgava biṭṭu,
guḍiyaliṅgada munde nindu
nuḍigaḷa gaḍaṇava māḍuva
tuḍuguṇi kaḷḷuguḍi holeyara mukhava nōḍalāgadu
akhaṇḍa paripūrṇa ghanaliṅgaguru
cennabasavēśvara śivasākṣiyāgi.