ಮಾಳಿಗೆಯ ಮಣ್ಣು ಮಂಟಪಕ್ಕೆ ಸರಿಯೆ?
ಆಳಿಂಗೆ ಅರಸು ಸರಿಯೆ?
ಸೂಳೆಗೆ ಪತಿವ್ರತೆ ಸರಿಯೆ?
ನಿವಾಳಿಸಿ ಬಿಟ್ಟ ವಾಳಿಮಾನವರಿಗೆ
ಮೇಳವಾಡಿ ಮುಕರಿದರೆ ಭಕ್ತಿಬೆಳವಿಗೆ ಸರಿಯೆ?
ಅಗ್ಗ ಕೂಗಳಿಗೂಳರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Māḷigeya maṇṇu maṇṭapakke sariye?
Āḷiṅge arasu sariye?
Sūḷege pativrate sariye?
Nivāḷisi biṭṭa vāḷimānavarige
mēḷavāḍi mukaridare bhaktibeḷavige sariye?
Agga kūgaḷigūḷara mukhava nōḍalāgadu
akhaṇḍa paripūrṇa ghanaliṅgaguru
cennabasavēśvara śivasākṣiyāgi.