•  
  •  
  •  
  •  
Index   ವಚನ - 70    Search  
 
ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ ಕುನ್ನಿಗಳಿರ ನೀವು ಕೇಳಿರೊ. ನಿಮಗೆ ಗುರುವಿಲ್ಲ. ಅದೇನು ಕಾರಣವೆಂದರೆ, ಅವಳಿಗೆ ಪಾದೋದಕ ಪ್ರಸಾದವಿಲ್ಲ ; ಅವಳಿಗೆ ಮತವಿಲ್ಲ ; ಧರ್ಮದ ದಾರಿಯೆಲ್ಲಾ ದುರ್ಧರ. ಆ ದುರಾಚಾರಿಯನಾಳುವ ಹೊಲೆಯರಿಗೆ ಗುರುಲಿಂಗಜಂಗಮದ ಪಾದೋದಕ ಪ್ರಸಾದವಿಲ್ಲ. ಅವನಿಗೆ ಆ ಹೆಂಡತಿಯೆ ತನ್ನ ಗುರುವೆಂದು ಮುನ್ನಿನ ತನ್ನ ಗುರುವ ಬಿಡುವ ಗನ್ನಘಾತಕ ಕುನ್ನಿ ಕುಲಹೀನರಿಗೆ ಭಕ್ತಿಮುಕ್ತಿಯೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Matavalla, heṇṇa hiḍidu tanna munnina guruvaṁ biṭṭa kunnigaḷira nīvu kēḷiro. Nimage guruvilla. Adēnu kāraṇavendare, avaḷige pādōdaka prasādavilla; avaḷige matavilla; dharmada dāriyellā durdhara. Ā durācāriyanāḷuva holeyarige guruliṅgajaṅgamada pādōdaka prasādavilla. Avanige ā heṇḍatiye tanna guruvendu munnina tanna guruva biḍuva gannaghātaka kunni kulahīnarige bhaktimuktiyelliyado? Illa, akhaṇḍa paripūrṇa ghanaliṅgaguru cennabasavēśvara śivasākṣiyāgi.